"ನಿಮ್ಮ ಅಂತರಂಗದಾಳದಲ್ಲಿ ನೀವು ತೀವ್ರವಾಗಿ ಏನನ್ನು ಬಯಸುತ್ತೀರೋ, ನೀವು ಅದೇ ಆಗಿರುತ್ತೀರಿ. ಮತ್ತು, ಅದಕ್ಕೆ ತಕ್ಕಂತೆ ನಿಮ್ಮ ಚರ್ಯೆ ಇರುತ್ತದೆ. ನಿಮ್ಮ ಚರ್ಯೆಯಂತೆ ನಿಮ್ಮ ಕಾರ್ಯ, ನಿಮ್ಮ ಕಾರ್ಯದಂತೆ ನಿಮ್ಮ ಭವಿಷ್ಯವಿರುತ್ತದೆ" ಅನ್ನುತ್ತದೆ ಬೃಹಾದರಣ್ಯಕ ಉಪನಿಷತ್ತು. ಮೂಲಮಂತ್ರ: ಯಥಾಕಾರೀ ಯಥಾಚಾರೀ ತಥಾ ಭವತಿ; ಸಾಧುಕಾರೀ ಸಾಧುರ್ಭವತಿ; ಪಾಪಕಾರೀ ಪಾಪೋ ಭವತಿ; ಪುಣ್ಯಃ ಪುಣ್ಯೇನ ಕರ್ಮಣಾ ಭವತಿ, ಪಾಪಃ ಪಾಪೇನ | ಅಥೋ ಖಲ್ವಾಹುಃ ಕಾಮಮಯ ಏವಾಯಂ ಪುರುಷ ಇತಿ; ಸ ಯಥಾಕಾಮೋ ಭವತಿ ತತ್ ಕ್ರತುರ್ಭವತಿ, ಯತ್…
Posts about featured written by ಅರಳಿ ಮರ
Posts about ಸುಭಾಷಿತ written by ಅರಳಿ ಮರ
ಇಂದಿನ ಸುಭಾಷಿತ... ಅಸ್ತೇಯಪ್ರತಿಷ್ಠಾಯಾಂ ಸರ್ವರತ್ನೋಪಸ್ಥಾನಮ್।।ಪತಂಜಲಿ ಯೋಗ ಸೂತ್ರ । 2.37 ಅರ್ಥ: ಕಳ್ಳತನ ಎಲ್ಲಕ್ಕಿಂತ ದೊಡ್ಡ ಅಪರಾಧ. ಆದ್ದರಿಂದ ಕದಿಯದೆ ಇರುವುದು ಎಲ್ಲಕ್ಕಿಂತ ಉನ್ನತವಾದ ಮೌಲ್ಯವಾಗಿದೆ. ತಾತ್ಪರ್ಯ: ಇಲ್ಲಿ ಕದಿಯುವುದು ಅಂದರೆ ಕೇವಲ ಐಹಿಕ ವಸ್ತುಗಳನ್ನು ಕದಿಯುವುದು ಎಂದಲ್ಲ. ಮನುಷ್ಯರ ಪ್ರತಿಯೊಂದು ಅಪರಾಧವೂ ಕಳ್ಳತನವೇ ಆಗಿದೆ. ಕೊಲೆ ಕೂಡಾ ಕಳ್ಳತನವೇ. ಕೊಲೆ ಮಾಡುವ ಮೂಲಕ ವ್ಯಕ್ತಿ ಮತ್ತೊಬ್ಬರ ಬದುಕಿನ ಹಕ್ಕನ್ನು ಕಸಿದಿರುತ್ತಾನೆ, ಸಂಬಂಧಿತರ ಸುಖವನ್ನು ಕದ್ದಿರುತ್ತಾನೆ. ಸುಳ್ಳು ಹೇಳುವ ವ್ಯಕ್ತಿ ಮತ್ತೊಬ್ಬರ ವಿಶ್ವಾಸವನ್ನು ಕಸಿದಿರುತ್ತಾನೆ. ಮೋಸ ಮಾಡುವ…
ಇಂದಿನ ಸುಭಾಷಿತ, ಯೋಗ ವಾಸಿಷ್ಠದಿಂದ...
ಇಂದಿನ ಸುಭಾಷಿತ, 'ನ್ಯಾಯ ರತ್ನಾಕರ'ದಿಂದ... ದೃಷ್ಟಿಪೂತಂ ನ್ಯಸೇತ್ ಪಾದಂ ವಸ್ತ್ರಪೂತಂ ಪಿಬೇಜ್ಜಲಂ ಶಾಸ್ತ್ರಪೂತಾಂ ವದೇದ್ವಾಚಂ ಮನಃಪೂತಂ ಸಮಾಚರೇತ್ ॥ನ್ಯಾಯರತ್ನಾಕರ : 22 ॥ ಅರ್ಥ: ಕಣ್ಣಿಂದ ನೋಡಿ ದೋಷರಹಿತವಾದ ಹೆಜ್ಜೆಯನ್ನಿಡಬೇಕು. ಬಟ್ಟೆಯಿಂದ ಶೋಧಿಸಿದ ನೀರನ್ನು ಕುಡಿಯಬೇಕು. ಶಾಸ್ತ್ರಸಮ್ಮತವಾದ (ತರ್ಕಬದ್ಧವಾದ) ಮಾತನ್ನಾಡಬೇಕು. ಮನಸ್ಸಿಗೆ ಸರಿ ಅನಿಸಿದ್ದನ್ನು ಆಚರಿಸಬೇಕು. ತಾತ್ಪರ್ಯ: ನಾವು ಹೆಜ್ಜೆ ಇಡುವಾಗ ದಾರಿಯನ್ನು ಸರಿಯಾಗಿ ಗಮನಿಸಿ ಹೆಜ್ಜೆ ಇಡಬೇಕು. ಇಲ್ಲದಿದ್ದರೆ ಕಲ್ಲು ಮುಳ್ಳು ಚುಚ್ಚಿಯೋ, ಕೊರಕಲಿಗೆ ಬಿದ್ದೋ ಗಾಯವಾಗುವುದು ಖಚಿತ. ಹಾಗೆಯೇ ಬಟ್ಟೆಯಿಂದ ಶೋಧಿಸಿದ ಶುದ್ಧ ನೀರನ್ನು…